ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ-ಅಗ್ನಿ-5 ಅಣ್ವಸ್ತ್ರ ವಾಹಕ

0
572

ಅಣ್ವಸ್ತ್ರ ವಾಹಕ ಕ್ಷಿಪಣಿ ಪರಿಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. 5000 ಕಿ.ಮೀ ದೂರ ಕ್ರಮಿಸಬಲ್ಲ ಈ ಕ್ಷಿಪಣಿ ಯಶಸ್ವಿಯಾಗಿ ಕಕ್ಷೆಗೆ ಸೇರಿದೆ ಎಂದು ತಿಳಿದುಬಂದಿದೆ. ಭಾರತದ ಅತ್ಯಾಧುನಿಕ ಹಾಗೂ ಅತ್ಯಂತ ಶಕ್ತಿಶಾಲಿ ದಾಳಿ ನಡೆಸಬಲ್ಲ ಪರಿಣಾಮಕಾರಿ ಅಣ್ವಸ್ತ್ರ ವಾಗಿರುವ ಈ ಕ್ಷಿಪಣಿಯು ಶತ್ರುಗಳ ಪಾಲಿಗೆ ಬ್ರಹ್ಮಾಸ್ತ್ರವಾಗಲಿದೆ.

ಒಡಿಸಾದ ಬಾಲಸೋರ್ ನಲ್ಲಿ ಅಗ್ನಿ-5 ಕ್ಷಿಪಣಿ ಪರಿಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ ಈ ಕ್ಷಿಪಣಿ 17 ಮೀಟರ್ ಉದ್ದವಿದೆ. 2 ಮೀಟರ್ ಅಗಲವಿದೆ ಮತ್ತು 50 ಟನ್ ಉಡಾವಣಾ ಭಾರಹೊಂದಿದೆ. ಒಂದು ಟನ್ ಗಿಂತಲೂ ಅಧಿಕ ತೂಕದ ಅಣು ಸಿಡಿತಲೆಯನ್ನು ಇದು ಒಯ್ಯುವ ಸಾಮರ್ಥ್ಯ ಹೊಂದಿದೆ.

2012ರ ಎಪ್ರಿಲ್‌ 19ರಂದು ಮೊದಲ ಕ್ಷಿಪಣಿ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಅನಂತರ 2013ರ ಸೆ.15ರಂದು ಎರಡನೇ ಪರೀಕ್ಷೆ ಕೈಗೊಳ್ಳಲಾಗಿತ್ತು. 2015ರ ಜನವರಿ 31ರಂದು 3ನೇ ಪರೀಕ್ಷೆ ಕೈಗೊಳ್ಳಲಾಗಿತ್ತು.

SHARE
Previous articleaudio news

LEAVE A REPLY